ಹೋತೂರ್ ಶಾದಾಬ್ ವಾಹಬ್ ಅವರು ಅತ್ಯಂತ ಸಮರ್ಥ, ದೃಢನಿಷ್ಠೆ, ಸಹಕಾರ ಭಾವನೆಯುಳ್ಳ, ಸರಳತೆಯನ್ನು ಮೈಗೂಡಿಸಿಕೊಂಡ ಓರ್ವ ಅಪ್ಪಟ ದೇಶಾಭಿಮಾನಿ. ಇವರು ಮಾರ್ಚ್ 3 ರಂದು ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಪಡೆದರು. ಉನ್ನತ ಶಿಕ್ಷಣವನ್ನು ತಮಿಳುನಾಡಿನ ಉದಕಮಂಡಲ (ಊಟಿ)ಯಲ್ಲಿ ಪೂರೈಸಿದರು. ನಂತರ ಬಿ.ಕಾಂ ಪದವಿಯನ್ನು, ಉನ್ನತ ವ್ಯಾಸಂಗವಾದ ಮಾಸ್ಟರ್ ಆಫ್ ಬಿಸ್ನೆಸ್ ಅಡ್ಮಿನಿಸ್ಟ್ರೇಷನ್ (ಎಂ.ಬಿ.ಎ) ಅನ್ನು ಬೆಂಗಳೂರಿನಲ್ಲಿ ಪಡೆದರು.
ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಇವರು ತಮ್ಮ ಕುಟುಂಬದ ವ್ಯವಹಾರವಾದ ಗಣಿ ಉದ್ಯಮವನ್ನು ಸೇರಿದರು. ನುರಿತ ತಂತ್ರಜ್ಞರಿಂದ ಆ ಕ್ಷೇತ್ರದ ತಾಂತ್ರಿಕತೆಯನ್ನು ಮತ್ತು ಕೌಶಲ್ಯಗಲನ್ನು ಬಹಳ ಅಚ್ಚುಕಟ್ಟಾಗಿ ಕಲಿತರು ಮತ್ತು ರೂಢಿಸಿಕೊಂಡರು. ಇವರ ಆ ಕಲಿಕೆ ಅವರಿಗೆ ಮುಂದೆ ವರವಾಗಿ ಪರಿಣಮಿಸಿತು. ಇಂದು ಗಣಿ ಕ್ಷೇತ್ರದ ಎಲ್ಲಾ ವಿಭಾಗವನ್ನು ಅತ್ಯಂತ ಮನೋಜ್ಞವಾಗಿ ಶ್ರೀಯುತರು ನಿರ್ವಹಿಸುತ್ತಿದ್ದಾರೆ. ಇವರ ಈ ಬೆಳವಣಿಗೆಗೆ ಅವರು ತಮ್ಮ ಎಲ್ಲಾ ವ್ಯವಸ್ಥಾಪಕರು, ತಾಂತ್ರಿಕ ಸಲಹೆಗಾರರು, ವಿವಿಧ ವಿಭಾಗದ ಅನುಭವಶಾಲಿಗಳೇ ಕಾರಣವೆಂದು ನಂಬುತ್ತಾರೆ ಹಾಗು ಕೃತಜ್ಞರಾಗಿರುತ್ತಾರೆ.
ಇವರು ಈ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳನ್ನು ಪೂರೈಸಿದ್ದು, ಕಾರಿಗನೂರು ಮಿನರಲ್ ಮೈನಿಂಗ್ ಇಂಡಸ್ಟ್ರೀಯ 'ಸಿ.ಇ.ಓ' (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ತಮ್ಮ ಪ್ರತಿಭೆಯನ್ನು ವಿವಿದೆಡೆ ಪಸರಿಸಲೆಂದು ಸ್ಪಾಂಜ್ ಐರನ್ ಇಂಡಸ್ಟ್ರೀ, ರಿಯಲ್ ಎಸ್ಟೇಟ್ ಅಂತಹ ಉದ್ಯಮಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣವನ್ನು ಕೈಗೆತ್ತಿಕೊಂಡು ಅತ್ಯಂತ ಸುಂದರ ಭವ್ಯ ಕಟ್ಟಡಗಳನ್ನು ನಿರ್ಮಿಸಲು ಇಚ್ಛಿಸಿರುತ್ತಾರೆ.
ರಾಜ್ಯ, ರಾಷ್ಟ್ರಮಟ್ಟಗಳಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಹ ವ್ಯವಹಾರ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ವಿವಿಧ ರಾಷ್ಟ್ರಗಳಿಗೆ ಬೇಕಾಗುವಂತಹ ವಸ್ತುಗಳ ಬಗ್ಗೆ ಮಾಹಿತಿ ಪಡೆದು, ಅಂತಹ ಸರಕುಗಳನ್ನು ರಫ್ತು ಮಾಡುತ್ತಾರೆ. ಇವರು ಈ ಉದ್ಯಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಕನಸನ್ನು ಹೊತ್ತಿದ್ದು ಆ ನಿಟ್ಟಿನಲ್ಲಿ ಸಫಲವಾಗಿ ಮುಂದುವರೆಯುತ್ತಿದ್ದಾರೆ.
ಹೆಚ್. ಶಾದಾಬ್ ವಾಹಬ್ ರವರು ಎಷ್ಟೇ ದೊಡ್ಡ ಉದ್ಯಮಿಯಾದರೂ, ಸರಳ ಜೀವನವನ್ನು ವ್ಯಕ್ತಿಗತ ಮಾಡಿಕೊಂಡವರು. ತಮ್ಮನ್ನು ಸಮಾಜ ಸೇವೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ''ನಾವು ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ ಅಂತಹ ಸಮಾಜಕ್ಕೆ ತಿರುಗಿ ಏನಾದರೂ ಕೊಡಬೇಕು, ಒಳ್ಳೆಯದನ್ನು ಮಾಡಬೇಕು'' ಎಂಬ ಅವರ ತಂದೆಯ ಅಭಿಲಾಷೆಯೇ ಇವರ ಈ ವ್ಯಕ್ತಿತ್ವಕ್ಕೆ ಕಾರಣ.
ತಮ್ಮ ತಂದೆಯವರು ಉದ್ಯಮವನ್ನು ಹಾಗು ಸಮಾಜಮುಖಿ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದುದ್ದನ್ನು ಶ್ರೀಯುತ ಶಾದಾಬ್ ವಾಹಬ್ ರವರು ಬಹಳ ಹತ್ತಿರದಿಂದ ಗಮನಿಸುತ್ತಿದ್ದರು. ಇವರ ಈ ಆಸಕ್ತಿಯ ಪರಿಣಾಮವಾಗಿಯೇ 'ಹೋತೂರ್ ಚಾರಿಟಬಲ್ ಟ್ರಸ್ಟ್'ನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ವಿಭಾಗವು ಬಳ್ಳಾರಿಯ ಹೊಸಪೇಟೆ ಮತ್ತು ಬೆಂಗಳೂರಿನಲ್ಲಿ ಬಡವ ಬಲ್ಲಿದ, ಜಾತಿ, ಮತವೆಂಬ ಭೇದಭಾವವಿಲ್ಲದೆ, ಸಮಾಜದ ಎಲ್ಲಾ ವರ್ಗಗಳ ಬೇಕು ಬೇಡಗಳನ್ನು ಅರಿತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.
ವಾಹಬ್ ಗ್ರೂಪ್
ವಾಹಬ್ ಟವರ್ಸ್
ನಂ.185,ಇನ್ಫ್ಯಾಂಟರಿ ರೋಡ್,
3ನೇ ಮಹಡಿ,
ಕಂಟನ್ಮೆಂಟ್,ಬಳ್ಳಾರಿ-583 104.
ಕರ್ನಾಟಕ.
ದೂ:+91-8392-245826 || +91-8392-245827
ಫ್ಯಾಕ್ಸ್:+91-8392-245391
ಕಾಂಗ್ರೆಸ್ ಭವನ,
ನಂ.423/B, 4ನೇ ವಾರ್ಡ್,
ಪಟೇಲ್ ನಗರ,
ಹೊಸಪೇಟೆ–583 201,
ಬಳ್ಳಾರಿ,ಕರ್ನಾಟಕ.
ಟೆಲಿಫ್ಯಾಕ್ಸ್: 08394-228152
ವಾಹಬ್ ಗ್ರೂಪ್,
ವಾಹಬ್ ಟವರ್ಸ್,
ನಂ.1/4,1ನೇ ಮಹಡಿ,
ಬಾತ್ರಾ ಛೇಂಬರ್ಸ್,
ಕನ್ನಿಂಗ್ ಹ್ಯಾಮ್ ರೋಡ್,
ಬೆಂಗಳೂರು-560 052, ಕರ್ನಾಟಕ.
ದೂ: +91-80-22373767
ಫ್ಯಾಕ್ಸ್: +91-80-22373768